Thursday, 3 December 2015

ಗುರು ಎಂದರೆ ಯಾರು...

ಗುರು ಎಂದರೆ ಯಾರು ಎಂಬುದು ನಮ್ಮ ತಿಳುವಳಿಕೆಗೂ ಮೀರಿದ ಒಂದು ಸಂಗತಿ.
ಪದ-ಶಹಃ ಅರ್ಥ ನೋಡುವುದಾದರೆ ಸಂಸ್ಕೃತದಲ್ಲಿ 'ಗು' ಎಂದರೆ ಕತ್ತಲು 'ರು' ಎಂದರೆ ಹೊಡೆದೋಡಿಸುವುದು ಎಂದರ್ಥ. ಗುರು ಅಥವಾ ಪೀಠಾದಿಪತಿ ಎಂದಾಗಬೇಕ್ಕಿದ್ದರೆ ಮೊದಲು ಶಾಸ್ತ್ರಗಳ ಪ್ರಕಾರ ವಟುವಿನ ಜಾತಕದ ಇಂಚಿಂಚು ಕೂಡಿಬರಬೇಕು.ವೇಧ-ಉಪನಿಷತ್ತುಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿರಬೇಕು.
ಎಲ್ಲರಂತೆ ಮನೆ-ಮಠ,ಬಂಧು-ಬಳಗ, ಎಂಬಿತ್ಯಾದಿ ಸಂಭಂದಗಳನ್ನೆಲ್ಲಾ ಪಡೆದಿದ್ದರೂ ಅವೆಲ್ಲವನ್ನು ತೊರೆದು,ತನ್ನವರೆಲ್ಲರನ್ನು ತೊರೆದು,ಎಲ್ಲರೂ ತನ್ನವರಂಬ ವಿಶಾಲ ಮನೋಭಾವ ಹೊಂದಿರಬೇಕು.ಕಾಮ-ಕ್ರೋದ,ಮದ-ಮೋಹ,ಮತ್ಸರಾದಿಗಳನ್ನು ತ್ಯಜಿಸಿರಬೇಕು.
ಎಲ್ಲವನ್ನೂ ತೊರೆದು ಶೂನ್ಯದಿಂದ ಪುನರಾರಂಭಿಸಿ ಲೋಕದ ಜನಕ್ಕೆ ಹಿತವನ್ನೇ ಬಯಸಿ ಪರಿಪೂರ್ಣತೆಯ ಕಡೆಗೆ ಮುನ್ನಡೆಯಬೇಕು.ತಾಯಿಯನ್ನು  ಹೊರತಾಗಿ ಎಲ್ಲರನ್ನು ತಮ್ಮ ಸಾಮಾನ್ಯ ಭಕ್ತರೆಂದು ಭಾವಿಸಿ ಆಶಿರ್ವಧಿಸಬೇಕು.ಹೀಗೆ ಯೋಚಿಸುತ್ತಿರುವಾಗ ರಾಘವೇಶ್ವರ ಶ್ರೀಗಳು ಗುರುವಿನ ಬಗ್ಗೆ ಮಾತನಾಡುವಾಗ " ಪೂಜ್ಯ ಎಂಬುದು ಸೊನ್ನೆ, ಪರಮಪೂಜ್ಯ ಎಂಬುದು ದೊಡ್ಡ ಸೊನ್ನೆ"ಎಂದು ಹೇಳಿದ ಮಾತು ಸತ್ಯವೆಂದೆನಿಸುತ್ತದೆ.
ಒಂದು ಸಮಾಜಕ್ಕೆ ಗುರುವೆಂದು ಗುರುತಿಸಿಕೊಳ್ಳಬೇಕಿದ್ದರೆ ಒಬ್ಬ ಸಾಮಾನ್ಯ ವಟು ಪಡುವ ಕಷ್ಟಗಳನ್ನು "ಕೆಂಡದ ನಡುವೆ ಕಮಲ ಅರಳುವ ಹಾಗೆ"ಎಂದು ಭಾವಿಸಬಹುದು.
ಸಮಾಜದ ಒಳಿತಿಗಾಗಿ ಒಬ್ಬ ಗುರು ಕಷ್ಟಪಡುವ ಪರಿಯನ್ನು ತಿಳಿಯದೇ ಅಂತೆ-ಕಂತೆಗಳಿಗೆ ಕಿವಿಗೊಟ್ಟು ವಿನಾ-ಕಾರಣ ಗುರುವಿನ ನಿಂದನೆ ಮಾಡುವುದು ಉಚಿತವಲ್ಲ.
ಸತ್ಯವೆಂಬುದು ಬೂದಿ ಮಚ್ಚಿದ ಕೆಂಡದ ಹಾಗೆ.ಇಂದಲ್ಲಾ ನಾಳೆ ಬೆಳಕಿಗೆ ಬರುತ್ತದೆ.
ಅಪವಾದಗಳು ಯಾರಿಗೂ ತಪ್ಪಿಲ್ಲ-
ಆಪಾದಿತರೆಲ್ಲರೂ ಅಪರಾದಿಗಳಲ್ಲ.

              -M G Adarsh Mundigemane

No comments:

Post a Comment