Saturday, 16 July 2016

ಮಳೆಗಾಲದ ಆ ದಿನ

ಮೋಡಕ್ಕೆ ಮಳೆಯಾಗಿ ಭೂಮಿಗೆ ಬರಲು ಹಪಹಪಿತನ...
ಇಳೆಗೆ ಇದುವೆ ಮೊದಲ ಮಧುರ ಚುಂಬನ...
ಇದಕೆಲ್ಲಾ ಪ್ರೀತಿಯೇ ಕಾರಣ...
ಮಳೆಗೆ ತಂಪಾಯಿತು ಕಾನನ.....
ಎಷ್ಟು ಸುಂದರ ಮಳೆಗಾಲದ ಆ ದಿನ...
ತಣ್ಣನೆ ರಾತ್ರಿಲಿ ಬೆಚ್ಚನೆ ಹಾಸಿಗೆ....
ಚಪ್ಪರಿಸುವ ಬಾಯಿಗೆ ಹಪ್ಪಳ-ಸಂಡಿಗೆ....
ಹಸಿರಾಗಿ ಬೆಳೆದಿದೆ ಹುಲ್ಲು-ಗರಿಕೆ...
ಬೊರ್ಗರೆವ ಹಳ್ಳ-ತೊರೆಗಳು.....
ಮೈ ನೆನೆಸುವ ಮಳೆಹನಿಗಳು...
ಚುಮ-ಚುಮು ಚಳಿ ಜೊತೆಯಲಿ ಕಾಫಿ....
ಜೋರದ ಮಳೆಗಯಿಂದ ಶಾಲೆಗೆ ಊಫಿ....
ಹರಿವ ನೀರಿಗೆ ಯಾರ ಹಂಗಿಲ್ಲ.....
ಸುರಿವ ಮಳೆಗೆ ಸುಂಕವಿಲ್ಲ......
ಮನಕೆ ಮುದನೀಡಿತು ಅಮ್ಮನ ಅಪ್ಪುಗೆ....
ಇದಕಿಂತ ವರವು ಬೇರಿಲ್ಲ ನನಗೆ...ಹಗುರಾಯಿತು ಮೈ-ಮನ....
ಮಳೆಯ ಸಿಂಚನದಿ ಮರೆತೆ ನನ್ನೆ ನಾ...
ಎಷ್ಟು ಸುಂದರ ಮಳೆಗಾಲದ ಆ ದಿನ..

- M G Adarsh Mundigemane

Thursday, 3 December 2015

"ಶ್ರೀ ಮಠ"ದಲ್ಲೇನಿದೆ....!!!?

ಶ್ರೀ ಮಠದಲ್ಲೇನಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟಾಗ ನಾವು
ಎರಡು ಮುಖನಾದ ವಿಶ್ಲೇಷಣೆಯನ್ನು ಎದುರುಗೊಳ್ಳಬಹುದು..
ಒಬ್ಬ ನಾಸ್ತಿಕನ ಕಣ್ಣಿಗೆ ಅದು ಕೇವಲ ಒಂದು ದೊಡ್ಡ ಗುಮ್ಮಟದಂತೆ ಕಾಣಬಹುದು.ಆದರೆ ಆಸ್ತಿಕನಿಗೆ ಅದುವೇ ಪ್ರಾಚೀನ ಸಂಸ್ಕ್ರತಿ-ವೇದೋಪನಿಷತ್ತುಗಳ ಭದ್ರ ನೆಲೆ.
ನಾಸ್ತಿಕನಿಗೆ ಪೀಠಧಿಪತಿಯೋಬ್ಬರು ಎಲ್ಲರ ಗೌರವಕ್ಕೆ ಪಾತ್ರನಾಗುವ ಮಹಾನುಭಾವ. ಆದರೆ ಆಸ್ತಿಕನಿಗೆ ದಾರಿ ತಪ್ಪಿದ ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸುವ ವೇದ ವಿಧ್ಯೆಯನರಿತ ಜಗದ್ಗುರುವಾಗಿ ಪೀಠಧಿಪತಿಯೋಬ್ಬರು ಭಾವಿಸಲ್ಪಡುತ್ತಾರೆ.
ಡಾಂಬಿಕನಿಗೆ ಗುರುವಿನ ಮಾತು ಕೇವಲ ಪೊಳ್ಳು ಭಾಷಣವೆಂದೆನಿಸುತ್ತದೆ.ಆದರೆ ಗುರು ಭಕ್ತನಿಗದುವೇ ಆಶಿರ್ವಚನ,ದಿವ್ಯ- ಅಮೃತವಚನ.
ನಾಸ್ತಿಕನಿಗೆ ಮಂತ್ರಾಕ್ಷತೆಯು ನಾಲ್ಕು ಅಕ್ಕಿ ಕಾಳಿಗೆ ಸಮ ಆದರೆ ಗುರು ಭಕ್ತ ಸಮೂಹಕ್ಕದುವೆ ಶ್ರೀ ರಾಘವೇಶ್ವರರ ದಿವ್ಯ-ಪರಮ ಪ್ರಸಾದ.
ಭಕ್ತರ ಪಾಲಿಗೆ ಮಠವು ಶ್ರೀ ರಾಮ ದೇವರ ಭವ್ಯ-ಸನ್ನಿಧಿ.
ಈ ಕಾರಣದಿಂದ ಸತ್ಯವನ್ನರಿಯದೆ, ಮಠದ ಪರಂಪರೆಯನ್ನರಿಯದೆ ವಿನಾ-ಕಾರಣ ಗುರುನಿಂದನೆ,ಪೀಠನಿಂದನೆ ಭಕ್ತರಿಗೆ ಶ್ರೇಯಸ್ಕರವಲ್ಲ.ಸತ್ಯಕ್ಕೆ ಸೋಲಿಲ್ಲ, ಸತ್ಯದರ್ಶನವಾಗುವವರೆಗೂ ಶಾಂತರಾಗಿ ಕಾಯೋಣ.

     -M G Adarsh Mundigemane

ಗುರು ಎಂದರೆ ಯಾರು...

ಗುರು ಎಂದರೆ ಯಾರು ಎಂಬುದು ನಮ್ಮ ತಿಳುವಳಿಕೆಗೂ ಮೀರಿದ ಒಂದು ಸಂಗತಿ.
ಪದ-ಶಹಃ ಅರ್ಥ ನೋಡುವುದಾದರೆ ಸಂಸ್ಕೃತದಲ್ಲಿ 'ಗು' ಎಂದರೆ ಕತ್ತಲು 'ರು' ಎಂದರೆ ಹೊಡೆದೋಡಿಸುವುದು ಎಂದರ್ಥ. ಗುರು ಅಥವಾ ಪೀಠಾದಿಪತಿ ಎಂದಾಗಬೇಕ್ಕಿದ್ದರೆ ಮೊದಲು ಶಾಸ್ತ್ರಗಳ ಪ್ರಕಾರ ವಟುವಿನ ಜಾತಕದ ಇಂಚಿಂಚು ಕೂಡಿಬರಬೇಕು.ವೇಧ-ಉಪನಿಷತ್ತುಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿರಬೇಕು.
ಎಲ್ಲರಂತೆ ಮನೆ-ಮಠ,ಬಂಧು-ಬಳಗ, ಎಂಬಿತ್ಯಾದಿ ಸಂಭಂದಗಳನ್ನೆಲ್ಲಾ ಪಡೆದಿದ್ದರೂ ಅವೆಲ್ಲವನ್ನು ತೊರೆದು,ತನ್ನವರೆಲ್ಲರನ್ನು ತೊರೆದು,ಎಲ್ಲರೂ ತನ್ನವರಂಬ ವಿಶಾಲ ಮನೋಭಾವ ಹೊಂದಿರಬೇಕು.ಕಾಮ-ಕ್ರೋದ,ಮದ-ಮೋಹ,ಮತ್ಸರಾದಿಗಳನ್ನು ತ್ಯಜಿಸಿರಬೇಕು.
ಎಲ್ಲವನ್ನೂ ತೊರೆದು ಶೂನ್ಯದಿಂದ ಪುನರಾರಂಭಿಸಿ ಲೋಕದ ಜನಕ್ಕೆ ಹಿತವನ್ನೇ ಬಯಸಿ ಪರಿಪೂರ್ಣತೆಯ ಕಡೆಗೆ ಮುನ್ನಡೆಯಬೇಕು.ತಾಯಿಯನ್ನು  ಹೊರತಾಗಿ ಎಲ್ಲರನ್ನು ತಮ್ಮ ಸಾಮಾನ್ಯ ಭಕ್ತರೆಂದು ಭಾವಿಸಿ ಆಶಿರ್ವಧಿಸಬೇಕು.ಹೀಗೆ ಯೋಚಿಸುತ್ತಿರುವಾಗ ರಾಘವೇಶ್ವರ ಶ್ರೀಗಳು ಗುರುವಿನ ಬಗ್ಗೆ ಮಾತನಾಡುವಾಗ " ಪೂಜ್ಯ ಎಂಬುದು ಸೊನ್ನೆ, ಪರಮಪೂಜ್ಯ ಎಂಬುದು ದೊಡ್ಡ ಸೊನ್ನೆ"ಎಂದು ಹೇಳಿದ ಮಾತು ಸತ್ಯವೆಂದೆನಿಸುತ್ತದೆ.
ಒಂದು ಸಮಾಜಕ್ಕೆ ಗುರುವೆಂದು ಗುರುತಿಸಿಕೊಳ್ಳಬೇಕಿದ್ದರೆ ಒಬ್ಬ ಸಾಮಾನ್ಯ ವಟು ಪಡುವ ಕಷ್ಟಗಳನ್ನು "ಕೆಂಡದ ನಡುವೆ ಕಮಲ ಅರಳುವ ಹಾಗೆ"ಎಂದು ಭಾವಿಸಬಹುದು.
ಸಮಾಜದ ಒಳಿತಿಗಾಗಿ ಒಬ್ಬ ಗುರು ಕಷ್ಟಪಡುವ ಪರಿಯನ್ನು ತಿಳಿಯದೇ ಅಂತೆ-ಕಂತೆಗಳಿಗೆ ಕಿವಿಗೊಟ್ಟು ವಿನಾ-ಕಾರಣ ಗುರುವಿನ ನಿಂದನೆ ಮಾಡುವುದು ಉಚಿತವಲ್ಲ.
ಸತ್ಯವೆಂಬುದು ಬೂದಿ ಮಚ್ಚಿದ ಕೆಂಡದ ಹಾಗೆ.ಇಂದಲ್ಲಾ ನಾಳೆ ಬೆಳಕಿಗೆ ಬರುತ್ತದೆ.
ಅಪವಾದಗಳು ಯಾರಿಗೂ ತಪ್ಪಿಲ್ಲ-
ಆಪಾದಿತರೆಲ್ಲರೂ ಅಪರಾದಿಗಳಲ್ಲ.

              -M G Adarsh Mundigemane

Wednesday, 4 November 2015

"HOSTEL" ಕತೆ-ವ್ಯಥೆ..

ಹಾಸ್ಟೆಲ್ ಜೀವನ ಒಂದು ಸುಂದರ ಕಥೆ ..
ಆದರೆ ಇಲ್ಲಿ ಕಥೆಗಿಂತ ಜಾಸ್ತಿ ವ್ಯಥೆ..
ಹೊತ್ತಿನ ಊಟಕ್ಕೂ ಬೇಕು Warden ಅಪ್ಪಣೆ..
ಮರೆಯಲಾಗದು ನಮ್ಮ-ನಮ್ಮ ಮನೆ...
ಸುತೆಲ್ಲಾ ಸುತ್ತುವರಿದ ಕಣ್ಣುಗಳು...
ಗೋಡೆ-ಕಿಟಕಿಗಳ ಸಂದಿ-ಗೊಂದಿಯಲ್ಲಿ ಅಡಗಿರುವ ಕಿವಿಗಳು...
ನಾಲಿಗೆ ಒಂದೇ ಆದರೂ ಎರಡೆರಡು ಮಾತುಗಳು..
ಕರೆದಾಗ ಬಿಗಿದಪ್ಪಿ ತಬ್ಬುವ ಹಾಸಿಗೆ ದಿಂಬುಗಳು...
ನಾ seniorrr.ನೀ Junior ಎಂಬ ತಾರತಮ್ಯಗಳು....
ಊಟ-ತಿಂಡಿಗೆ ಉಪ್ಪಿಲ್ಲಾ..
ಸಾರಿಗೆ ಸೊಪ್ಪೆ ಎಲ್ಲಾ...
ನಮ್ಮಮ್ಮ ಕಟ್ಟಿಕೊಡುತ್ತಿದ್ದ ಬುತ್ತಿಯ ಮೀರಿಸೋಕಾಗಲ್ಲಾ...
ಓದು ಬರಹಕ್ಕೆ ಹೊತ್ತೆಯಿಲ್ಲಾ...
ಕೆಲವೊಮ್ಮ ಹೊತ್ತೆ ಗೊತ್ತಾಗೊಲ್ಲ..
ಒಮ್ಮಯೂ ಹಾಸ್ಟೆಲ್ ಲೈಫು ಸುಂದರ ಅಂತ ನಂಗೆ ಅನ್ನಿಸಿಲ್ಲಾ..
ಆದರೂ ಎಲ್ಲರೂ Hostel ಚೆನ್ನಾಗಿದ್ಯಾ ಅಂತ ಕೇಳೋದ್ ಬಿಡಲ್ಲ ಯಾಕೋ ಗೊತ್ತಿಲ್ಲಾ..

Tuesday, 27 October 2015

ಕರೆಯುತಿದೆ ನಮ್ಮೂರ ದಾರಿ...

ಕರೆಯುತಿದೆ ನಮ್ಮೂರ ದಾರಿ...
ದಾಟಿ ಬಂದಿರುವೆ ಹತ್ತಾರು ಊರು-ಕೇರಿ..
ಎತ್ತಲೋ ಸಾಗುತಿದೆ ಕನಸಿನ ದಾರಿ..
ಕಷ್ಟಗಳನು ಮೀರಿ.
ಸತ್ಯಕ್ಕೆ ಬೆಳಕು ತೋರಿ..
ಕನಸು ನನಸಾಗುವುದೆಂದು ಗೊತ್ತು ಕಣ್ರಿ.
ಆದರೂ ಮರೆಯದಂತೆ ಉಳಿಯಬೇಕಿದೆ ಮನೆಯ ದಾರಿ..
ಮನೆಯೇ ಮೊದಲ ಪಾಠಶಾಲೆ ಅಲ್ಲವೇನ್ರೀ.
ಮನೆಯ ನೆನಪು ಬಂದಾಗ ಇಳಿಯಿತು ಕಣ್ಣೀರು ಜಾರಿ..
ಸಾಧನೆಯ ಹಾದಿಯಲಿ ನಡೆಯಬೇಕಿದೆ ದುಃಖ-ದುಮ್ಮಾನಗಳನು ಮೀರಿ..
ಮನಸ್ಸನ್ನು ಗಟ್ಟಿಗೊಳಿಸುತ್ತಿವೆ ಪರಿಕ್ಷೆಯ ಜೊತೆ ಅಗ್ನಿಪರೀಕ್ಷೆಗಳು ಸೇರಿ..
ಆದರೂ ಮತ್ತೆ-ಮತ್ತೆ ಕರೆಯುತಿದೆ ನಮ್ಮೂರ ದಾರಿ..
ಈಗಲೇ ಹೋಗಬಹುದೇ ಹಾರಿ..
ಹೊರಟು ನಿಂತಾಗ KSRTC ಬಸ್ಸೇ ನಮ್ಮ ಪಾಲಿಗೆ ಅಂಬಾರಿ..
ನಾ ನಿಮ್ಮವ ರ್ರೀ...
ಗೆದ್ದಾಗ ಬೆನ್ನು ತಟ್ಟಿದಿರಿ..
ಸೋತಾಗ ಬುದ್ದಿ ಹೇಳಿದಿರಿ..
ಮತ್ತೆ-ಮತ್ತೆ ಕರೆಯುತಿದೆ ನಮ್ಮ ಮನೆಯ ದಾರಿ...