Thursday, 3 December 2015

"ಶ್ರೀ ಮಠ"ದಲ್ಲೇನಿದೆ....!!!?

ಶ್ರೀ ಮಠದಲ್ಲೇನಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟಾಗ ನಾವು
ಎರಡು ಮುಖನಾದ ವಿಶ್ಲೇಷಣೆಯನ್ನು ಎದುರುಗೊಳ್ಳಬಹುದು..
ಒಬ್ಬ ನಾಸ್ತಿಕನ ಕಣ್ಣಿಗೆ ಅದು ಕೇವಲ ಒಂದು ದೊಡ್ಡ ಗುಮ್ಮಟದಂತೆ ಕಾಣಬಹುದು.ಆದರೆ ಆಸ್ತಿಕನಿಗೆ ಅದುವೇ ಪ್ರಾಚೀನ ಸಂಸ್ಕ್ರತಿ-ವೇದೋಪನಿಷತ್ತುಗಳ ಭದ್ರ ನೆಲೆ.
ನಾಸ್ತಿಕನಿಗೆ ಪೀಠಧಿಪತಿಯೋಬ್ಬರು ಎಲ್ಲರ ಗೌರವಕ್ಕೆ ಪಾತ್ರನಾಗುವ ಮಹಾನುಭಾವ. ಆದರೆ ಆಸ್ತಿಕನಿಗೆ ದಾರಿ ತಪ್ಪಿದ ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸುವ ವೇದ ವಿಧ್ಯೆಯನರಿತ ಜಗದ್ಗುರುವಾಗಿ ಪೀಠಧಿಪತಿಯೋಬ್ಬರು ಭಾವಿಸಲ್ಪಡುತ್ತಾರೆ.
ಡಾಂಬಿಕನಿಗೆ ಗುರುವಿನ ಮಾತು ಕೇವಲ ಪೊಳ್ಳು ಭಾಷಣವೆಂದೆನಿಸುತ್ತದೆ.ಆದರೆ ಗುರು ಭಕ್ತನಿಗದುವೇ ಆಶಿರ್ವಚನ,ದಿವ್ಯ- ಅಮೃತವಚನ.
ನಾಸ್ತಿಕನಿಗೆ ಮಂತ್ರಾಕ್ಷತೆಯು ನಾಲ್ಕು ಅಕ್ಕಿ ಕಾಳಿಗೆ ಸಮ ಆದರೆ ಗುರು ಭಕ್ತ ಸಮೂಹಕ್ಕದುವೆ ಶ್ರೀ ರಾಘವೇಶ್ವರರ ದಿವ್ಯ-ಪರಮ ಪ್ರಸಾದ.
ಭಕ್ತರ ಪಾಲಿಗೆ ಮಠವು ಶ್ರೀ ರಾಮ ದೇವರ ಭವ್ಯ-ಸನ್ನಿಧಿ.
ಈ ಕಾರಣದಿಂದ ಸತ್ಯವನ್ನರಿಯದೆ, ಮಠದ ಪರಂಪರೆಯನ್ನರಿಯದೆ ವಿನಾ-ಕಾರಣ ಗುರುನಿಂದನೆ,ಪೀಠನಿಂದನೆ ಭಕ್ತರಿಗೆ ಶ್ರೇಯಸ್ಕರವಲ್ಲ.ಸತ್ಯಕ್ಕೆ ಸೋಲಿಲ್ಲ, ಸತ್ಯದರ್ಶನವಾಗುವವರೆಗೂ ಶಾಂತರಾಗಿ ಕಾಯೋಣ.

     -M G Adarsh Mundigemane

ಗುರು ಎಂದರೆ ಯಾರು...

ಗುರು ಎಂದರೆ ಯಾರು ಎಂಬುದು ನಮ್ಮ ತಿಳುವಳಿಕೆಗೂ ಮೀರಿದ ಒಂದು ಸಂಗತಿ.
ಪದ-ಶಹಃ ಅರ್ಥ ನೋಡುವುದಾದರೆ ಸಂಸ್ಕೃತದಲ್ಲಿ 'ಗು' ಎಂದರೆ ಕತ್ತಲು 'ರು' ಎಂದರೆ ಹೊಡೆದೋಡಿಸುವುದು ಎಂದರ್ಥ. ಗುರು ಅಥವಾ ಪೀಠಾದಿಪತಿ ಎಂದಾಗಬೇಕ್ಕಿದ್ದರೆ ಮೊದಲು ಶಾಸ್ತ್ರಗಳ ಪ್ರಕಾರ ವಟುವಿನ ಜಾತಕದ ಇಂಚಿಂಚು ಕೂಡಿಬರಬೇಕು.ವೇಧ-ಉಪನಿಷತ್ತುಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿರಬೇಕು.
ಎಲ್ಲರಂತೆ ಮನೆ-ಮಠ,ಬಂಧು-ಬಳಗ, ಎಂಬಿತ್ಯಾದಿ ಸಂಭಂದಗಳನ್ನೆಲ್ಲಾ ಪಡೆದಿದ್ದರೂ ಅವೆಲ್ಲವನ್ನು ತೊರೆದು,ತನ್ನವರೆಲ್ಲರನ್ನು ತೊರೆದು,ಎಲ್ಲರೂ ತನ್ನವರಂಬ ವಿಶಾಲ ಮನೋಭಾವ ಹೊಂದಿರಬೇಕು.ಕಾಮ-ಕ್ರೋದ,ಮದ-ಮೋಹ,ಮತ್ಸರಾದಿಗಳನ್ನು ತ್ಯಜಿಸಿರಬೇಕು.
ಎಲ್ಲವನ್ನೂ ತೊರೆದು ಶೂನ್ಯದಿಂದ ಪುನರಾರಂಭಿಸಿ ಲೋಕದ ಜನಕ್ಕೆ ಹಿತವನ್ನೇ ಬಯಸಿ ಪರಿಪೂರ್ಣತೆಯ ಕಡೆಗೆ ಮುನ್ನಡೆಯಬೇಕು.ತಾಯಿಯನ್ನು  ಹೊರತಾಗಿ ಎಲ್ಲರನ್ನು ತಮ್ಮ ಸಾಮಾನ್ಯ ಭಕ್ತರೆಂದು ಭಾವಿಸಿ ಆಶಿರ್ವಧಿಸಬೇಕು.ಹೀಗೆ ಯೋಚಿಸುತ್ತಿರುವಾಗ ರಾಘವೇಶ್ವರ ಶ್ರೀಗಳು ಗುರುವಿನ ಬಗ್ಗೆ ಮಾತನಾಡುವಾಗ " ಪೂಜ್ಯ ಎಂಬುದು ಸೊನ್ನೆ, ಪರಮಪೂಜ್ಯ ಎಂಬುದು ದೊಡ್ಡ ಸೊನ್ನೆ"ಎಂದು ಹೇಳಿದ ಮಾತು ಸತ್ಯವೆಂದೆನಿಸುತ್ತದೆ.
ಒಂದು ಸಮಾಜಕ್ಕೆ ಗುರುವೆಂದು ಗುರುತಿಸಿಕೊಳ್ಳಬೇಕಿದ್ದರೆ ಒಬ್ಬ ಸಾಮಾನ್ಯ ವಟು ಪಡುವ ಕಷ್ಟಗಳನ್ನು "ಕೆಂಡದ ನಡುವೆ ಕಮಲ ಅರಳುವ ಹಾಗೆ"ಎಂದು ಭಾವಿಸಬಹುದು.
ಸಮಾಜದ ಒಳಿತಿಗಾಗಿ ಒಬ್ಬ ಗುರು ಕಷ್ಟಪಡುವ ಪರಿಯನ್ನು ತಿಳಿಯದೇ ಅಂತೆ-ಕಂತೆಗಳಿಗೆ ಕಿವಿಗೊಟ್ಟು ವಿನಾ-ಕಾರಣ ಗುರುವಿನ ನಿಂದನೆ ಮಾಡುವುದು ಉಚಿತವಲ್ಲ.
ಸತ್ಯವೆಂಬುದು ಬೂದಿ ಮಚ್ಚಿದ ಕೆಂಡದ ಹಾಗೆ.ಇಂದಲ್ಲಾ ನಾಳೆ ಬೆಳಕಿಗೆ ಬರುತ್ತದೆ.
ಅಪವಾದಗಳು ಯಾರಿಗೂ ತಪ್ಪಿಲ್ಲ-
ಆಪಾದಿತರೆಲ್ಲರೂ ಅಪರಾದಿಗಳಲ್ಲ.

              -M G Adarsh Mundigemane